Bigg Boss Kannada Season 5 : ಚಂದನ್ ಶೆಟ್ಟಿ ಗೆ ಥ್ಯಾಂಕ್ಸ್ ಹೇಳಿದ ರಿಯಾಜ್ ಭಾಷಾ | Filmibeat Kannada

2017-11-14 1

ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕನೇ ವಾರ ಲಕ್ ಮೇಲೆ ಕ್ಯಾಪ್ಟನ್ ಆದ ರಿಯಾಝ್ ಯಾರಿಗೂ ಭೇದಭಾವ ಮಾಡಬಾರದು ಎಂಬ ಕಾರಣಕ್ಕೆ ಕಾರ್ಪರೇಟ್ ಸ್ಟೈಲ್ ನಲ್ಲಿ ಮನೆ ನಡೆಸಿದರು. ಹಾಲು ಮುಚ್ಚಿಟ್ಟು ದೊಡ್ಡ ರಾದ್ಧಾಂತ ಆದ ಕಾರಣ, ಸ್ಟಾಕ್ ಚೆಕ್ಕಿಂಗ್ ಮಾಡಿದರು. ಆದರೆ, ಇದೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಹಿಡಿಸಲಿಲ್ಲ. ರಿಯಾಝ್ ರವರ ನಡೆ, ತೆಗೆದುಕೊಂಡ ನಿರ್ಧಾರಗಳು ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ಟಾರ್ಗೆಟ್ ಆಗಿದ್ದರು.ನಿರೀಕ್ಷೆಯಂತೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಲಭ್ಯವಾದವು. ಆದ್ರೆ, ಚಂದನ್ ಶೆಟ್ಟಿ ಕೃಪೆಯಿಂದ ಕ್ಷಣಾರ್ಧದಲ್ಲಿ ರಿಯಾಝ್ ಸೇಫ್ ಆಗ್ಹೋದರು. ರಿಯಾಝ್ ಭಾವಚಿತ್ರದ ಬ್ಲಾಕ್ ಗಳನ್ನು ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗವಾದಂತೆ ಆಯಿತು.

Videos similaires